ಆರೇಬಿಯದಲ್ಲಿ ಭಾರತೀಯರು

ನಮ್ಮ ಭಾರತೀಯರು ಈ ಹತ್ತು ವರ್ಷಗಳಲ್ಲಿ ಸಾಕಷ್ಟು ತುಂಬಿಹೋಗಿದ್ದಾರೆ ಇಲ್ಲಿ. 1990ರ ಪ್ರಕಾರ ಸೌದಿ ಅರೇಬಿಯದಲ್ಲಿ 4 ಲಕ್ಷ ಭಾರತೀಯರು ಕೆಲಸದಲ್ಲಿ ದ್ಧಾರೆಂದು ಭಾರತೀಯ ದೂತಾವಾಸದ ಮೂಲಕ ತಿಳಿಯಿತು. ಪ್ರತಿ ತಿಂಗಳಿಗೆ 7,00 ಭಾರತೀಯರನ್ನು ಸೌದಿಯ ವಿವಿಧ ಕೆಂಪನಿಗಳು ಕೆಲಸಕ್ಕೆ ಹೊಂದಿಸಿಕೊಳ್ಳುವವು. ಪ್ರತಿ ದಿನ 400 ಭಾರತೀಯರ ವಿವಿಧ ಸೇವೆಗಾಗಿ ದೂತಾವಾಸ ಸದಾಸಿದ್ಧವಾಗಿರವದು. ಉದಾ: ಪಾಸ್‌ಪೋರ್ಟ್‌ ನವೀಕರಣ ಅದಕ್ಕೆ ಹೊಂದಿಕೊಂಡೇ ಏನೇನೋ ಸಮಸ್ಯೆಗಳ ಪರಿಹಾರ, ಅಕ್ಸಿಡೆಂಟ್ – ಸಾವು ನೋವುಗಳ ದಾಖಲೆಯಾಗಲಿ, ಅವುಗಳನ್ನು ಭಾರತಕ್ಕೆ ತಲುಪಿಸುವ ಹೊಣೆಯಾಗಲಿ, ಅದರಂತೆ ಸಾಮಾನುಗಳ ಆಯಾತ ನಿರ್ಯಾತ
ಕಾರ್ಯಚರಣೆ, ಹೀಗೆ ಇನ್ನೂ ಏನೇನೋ ಕಾಗದ ಪಾತ್ರಗಳ ಕೆಲಸಕ್ಕೆಂದು ಜನ ದೂತಾವಾಸಕ್ಕೆ ಬರಲೇ ಬೇಕಾಗುವದು. ಅದರಂತೆ ಪ್ರತಿದಿನ 100 ಸೌದಿಗಳು ಛಾರತಕ್ಕೆ ಉದ್ಯೋಗ ಪ್ಯಾಪಾರಕ್ಕೆಂದಾಗಲೀ, ಪ್ರವಾಸಕ್ಕೆಂದಾಗಲೀ ಹೋಗಬೇಕಾದಲ್ಲಿ ಇವರೂ ಭಾರತೀಯ ದೂತಾವಾಸಕ್ಕೆ ಹೋಗಿ ವೀಸಾ  ಮಾಡಿಕೊಳ್ಳ ಬೇಕಾಗುವದು.

ಸೌದಿ ಅರೇಬಿಯದಲ್ಲಿ ಅಷ್ಟೇ ಇಷ್ಟಿದ್ದರೆ ಇಡೀ  ಕೊಲ್ಲಿ ದೇಶಗಳಲ್ಲೆಲ್ಲ ಛಾರತೀಯರು ಸಾಕಷ್ಟು ಇದ್ದಾರೆ. ಒಳ್ಳೊಳ್ಳೆಯ ಹುದ್ದೆಗಳಲ್ಲಿ ಒಳೆಯ ಹೆಸರು ಪಡೆದವರು ಅನೇಕರು.

ಕೇರಳದ ಜನರು ಸಾಹಸ ಪ್ರವೃತ್ತಿ ಯವರು. ಕೇರಳದ ಪ್ರತಿಯೊಂದು ಕುಟುಂಬ ದಿಂದ ಒಬ್ಬರಾದರೂ ಕೊಲ್ಲಿ ದೇಶಗಳಲ್ಲಿ ಇದ್ದಾರೆನ್ನುವುದು, ಅವರ ಕುಟುಂಬಗಳಿಗೆ ಅಭಿಮಾನ. ಅಷ್ಟೆ ಅವರ ಬಗೆಗೆ ನಮಗೂ ತುಂಬಾ ಅಭಿಮಾನ. ಹೊರದೇಶ ದಲ್ಲಿದ್ದರೂ  ಅಷ್ಟಕಷ್ಟೇ ಕೂಡ್ರುವವರಲ್ಲ. ಒಂದಲ್ಲೊಂದು ಕೆಲಸದಲ್ಲಿ ತೊಡಗಿರುತ್ತಾರೆ. ಇವರು ಎಲ್ಲಿಯೇ ಇರಲಿ, ಇವರದೊಂದು ವಿಶಿಷ್ಟಗುಂಪು. ಅಂತೆಯೇ ಕೊಲ್ಲಿ ದೇಶಗಳಲ್ಲೆಲ್ಲ ವೈದ್ಯರು, ನರ್ಸುಗಳಿಂದ ಹಿಡಿದು ರಸ್ತೆ ಕಸಗುಡಿಸುವ ಜನರೂ ಯಾವ ದಿಮಾಕೂ ಮಾಡದೆ ಮನಸಾರೆ ದುಡಿಯುತ್ತಾರೆ. ಭಾರತಕ್ಕೆ ಹಣ
ಮಹಾಪೂರದಂತೆ ಹರಿಸುವಲ್ಲಿ ಕೇರಳಿಗರೆದೇ ಮೇಲುಗೈ ಕೇರಳಕ್ಕೆ ಯಾರಾದರೂ ಭೆಟ್ಟಿ ಕೊಟ್ಟಿದ್ದರೆ ಅವರ ಜೀವನ ಶೈಲಿಗಳೀದ ಆಳಾಗಿ ಹೊರದೇಶಕ್ಕೆ ಹೋಗಿ ದುಡಿ ಅರಸಾಗಿ ಉಣ್ಣು, ಎನ್ನುವ ಮಾತು ಸತ್ಯವೆನಿಸುವುದು.

ನಂತರ ವಿಚಾರಗಳಿಂದ ಗೊತ್ತಾದದ್ದೇನೆಂದರೆ ಕೇರಳದ ಮಲೆಯಾಳಿಗಳು ಕೇರಳದಲ್ಲಿ ದುಡಿಯುವುದಿಲ್ಲ. ಯಾವುದಕ್ಕೆಲ್ಲಾ ಸ್ಟ್ರೈಕ್ ಮಾಡಿ ಕಂಪನಿಗಳನ್ನು ಹಾಳು ಮಾಡುವದರಲ್ಲಿ ಮೇಲುಗೈ. ಅದಕ್ಕೆ ಕೇರಳದಲ್ಲಿ ಔದ್ಯೋಗೀಕರಣ ಕಡಿಮೆ. ನಿಮ್ಮ ಕಾರು ನಿಮ್ಮ ಮನೆಯ ಮುಂದೆ ಬಂದು ನಿಂತಾಗ ಕಾರಿನ ಸಾಮಾನುಗಳನ್ನು ನೀವು
ನಿಮ್ಮ ಮಕ್ಕಳು ಮನೆಯ ಒಳಗೆ ಎತ್ತಿ ಇಟ್ಟರೂ ಕೂಡ ನೀವು ನೌಕಕರ ಯೂನಿಯನ್‌ಗೆ ಹಣಕೊಡಬೇಕು. ಅಥವಾ ನೀವು ಇಳಿಸುವವರೆಗೆ ಸುಮ್ಮನಿದ್ದು ನಂತರ ಬಂದ ಕೆಲಸಗಾರರ ಯೂನಿಯನ್ನವನಿಗೆ ನೀವು ಹಣಕೊಡಬೇಕು. ಇದೆಲ್ಲಾ ಮಲೆಯಾಳಿಗಳು ಹೇಳಿದ್ದು ನಮಗೆ ಜೆಡ್ಡಾದಲ್ಲಿ. ಇನ್ನೊಂದು ವಿಚಿತ್ರವೇನೆಂದರೆ ಇಲ್ಲಿ ಕಿರಾಣಿ ಅಂಗಡಿ, ಹೋಟೆಲ್ ಮುಂತಾದ ಕಡೆ ಕೆಲಸಮಾಡುವ ಎಷ್ಟೋ ಮಲೆಯಾಳಿ ಗಳಿಗೆ ಕೇವಲ 2 ಭಾಷೆ ಮಾತ್ರ ಗೊತ್ತು. ಒಂದು ಮಲೆಯಾಳಿ ಇನ್ನೊಂದು ಅರಬ್ಬಿ. ಕೇರಳದಿಂದ ಬಂದ 4-6 ತಿಂಗಳಲ್ಲಿ ಅರಬ್ಬಿ ಕಲಿಯುತ್ತಾರೆ. ಸಣ್ಣ  ಕೆಲಸದಲ್ಲಿರುವವರಿಗೆ ಇಂಗ್ಲೀಷ್, ಹಿಂದಿ ಬರುವದಿಲ್ಲ. ಅರಬಿಗಳು ಮಲೆಯಾಳಿಗಳನ್ನು ಬಹಳ ಹೊಗಳುತ್ತಾರೆ
ಅವರ ಕಠಿಣ ಶ್ರಮಕ್ಕೆ. ಇಷ್ಟು ಕಷ್ಟವನ್ನು ಕೇರಳದಲ್ಲಿ ಪಟ್ಟದ್ದರೆ ಕೇರಳ ಬಂಗಾರದ ನಾಡಾಗುತ್ತಿತ್ತೋ ಏನೋ.

ಅದರಂತೆ ಸಿಂಧಿ, ಮಾರವಾಡಿ, ಗುಜರಾತಿಗಳೂ ಜಗತ್ತಿನ ತುಂಬೆಲ್ಲಾ ವ್ಯಾಪಾರಿ ಬುದ್ಧಿಯಿಂದ ಅಡ್ಡಾಡುವದು ನೊಡಿದರೆ ನಮ್ಮ ಕರ್ನಾಟಕದ ಜನ ಬಹಳ ಆರಾಮ ತೆಗದುಕೊಳ್ಳುತ್ತಾರೆನಿಸುವದು. ಹೊಟ್ಟೆತುಂಬ ಊಟ ಸಿಕ್ಕು ಗಿಡದ ನೆರಳಾದರೆ ಸಾಕು ಅಷ್ಟು ಸಿಕ್ಕರೆ ಬೇರೇನೊ ಸಾಹಸ ಪ್ರವೃತ್ತಿಯೇ ಬೇಡ. ಹೊರದೇಶಗಳಲ್ಲಿ ನಮ್ಮ
ಕರ್ನಾಟಕದ ಜನ ಇದ್ಧಾರೆ, ಇಲ್ಲಂತಲ್ಲ; ಬೆರಳೆಣಿಕೆಯಷ್ಟು ಮಾತ್ರ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು.

ಇಲ್ಲಿ ದೂತಾವಾಸದ ಸುತ್ತೆಲ್ಲ ಭಾರತೀಯರೇ ಇದ್ಧಾರೆ. ಶಾಲೆಯೂ ಅಲ್ಲೇ ಇದೆ. ಅನೇಕ ಕೇರಳೀಯರ ಅಂಗಡಿಗಳು (ಭಾರತೀಯ ಇನ್ನಿತರ ಸಾಮಾನುಗಳೆಲ್ಲ) ಇವೆ. ಅಲ್ಲಲ್ಲಿ ಅಡ್ಡಾಡುವಾಗ ನಮ್ಮ ಜನ ಎಂದು ಖುಷಿ ಅನಿಸುತ್ತದೆ.

ಇಲ್ಲಿ ಭಾರತೀಯರು ಅಗೀಗ ಒಂದಾಗುವ ದಿನಗಳೆಂದರೆ ಆಗಷ್ಟ್‌ 15ರ ಸ್ವಾತಂತ್ರ್ಯೋತ್ಸವ, ಜನವರಿ 26ರ ಗಣರಾಜ್ಯೋತ್ಸವಗಳಂದು. ಅಂದು ದೂತಾವಾಸ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ಬೆಳಗ್ಗೆ ಜನ ಎಲ್ಲ ತೆರಳಿ ಧ್ವಜಾರೋಹಣದಲ್ಲಿ ಪಾಲ್ಗೊಳ್ಳುವರು. ವಿ.ಐ.ಪಿ. ಗಳಿಗೆ ಊಟ ತಿಂಡಿಯ ವ್ಯವಸ್ತೆ ಮಾಡಿರುತ್ತಾರೆ. ಸಂಜೆ ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತವೆ.

ದೂತಾವಾಸದ ಕಚೇರಿಯ ಕೆಲಸಗಳೆಲ್ಲ ಭಾರತದಲ್ಲಿ ನಡೆಯುವ ಕಚೇರಿ ಗಳಂತೆಯೇ ನಿಧಾನವಾಗಿ ಹರಟೆ ಹೊಟೆಯುತ್ತ ನಡದಿರುತ್ತವೆ. ಪಾಶ್ಚಾತ್ಯರು ಭಾರತಭೆಟ್ಟಿ (ಪ್ರವಾಸಕ್ಕೆಂದು) ವೀಸಾಕ್ಕೆಂದು ಬಂದರೆ ಸ್ವಲ್ಪ ಚುರುಕಾಗುತ್ತಾರೆ. ಅದೇ ನಮ್ಮ ದೇಶದ ನಾವುಗಳು ನಮ್ಮ ದೂತಾವಾಸಕ್ಕೆ ಹೋದರೆ ಮೊದಲೇ ಹೇಳಿದಂತೆ
ನಿಧಾನ, ಉದಾಸೀನತೆ ವ್ಯಕ್ತಪಡಿಸುವದು ಮಾಮೂಲು.

ಕೇರಳಿಗರು-ಮದ್ರಾಸಿಗರು ಈ ಹಬ್ಬಗಳಂದು ಎಲ್ಲಾದರೂ ಒಂದು, ಕುಟುಂಬಗಳ ಮನೋರಂಜನಾ ಕಾರ್ಯಕ್ರಮ ಇಟ್ಟುಕೊಂಡೇಬಿಡುತ್ತಾರೆ. ಹೀಗೆ ನಮ್ಮ ಕ್ಯಾಂಪಸ್ ನಲ್ಲಿ ಒಂದು ಸಲ ಪ್ರೊಗ್ರಾಂ ಹಾಕಿಯೇಬಿಟ್ರು. ನಗರದಿಂದ ನಾಲ್ಕೈದು  ಕುಟುಂಬಗಳು ಎರಡು ತಿಂಗಳು ಮೊದಲೇಬಂದು ಇಲ್ಲಿಯ ಥಿಯೇಟರ್‌ಗೆ ಬುಕ್ ಮಾಡಿದ್ಧರು.
ನಮಗೆ ಅಂದೆಲ್ಲಾ ಸಂಭ್ರಮ. ಅದರ ವ್ಯವಸ್ಥೆಗಳಿಗೆಲ್ಲ ಅದರಲ್ಲಿ ಪಾಲ್ಗೊಳ್ಳುವವರು, ಶುಭೇಚ್ಚಗಾರರು, ಕೂಡಕೊಂಡು ಹಣದ  ಮಾಡಿ ಊಟ ತಿಂಡಿ ಇನ್ನಿತರ ಖರ್ಚೆಲ್ಲಾ ವಹಿಸಿದರು.

ಸಂಜೆ 5 ಗಂಟೆಗೆ ಕಾರ್ಯಕ್ರಮ ಶುರುವಾಗುವದಿತ್ತು. ಅಗಲೇ ನಗರದಿಂದ ಸುಮಾರು 300ಕ್ಕೂ ಮೇಲ್ಪಟ್ಟು ಭಾರತೀಯ ಕುಟುಂಬಗಳು, ಬೇರೆ ಬೇರೆ ಅತಿಥಿಗಳು ಬಂದು ಸೇರಿದ್ಧರು. ಸುಮಾರು 800 ಜನರು ಅರಾಮವಾಗಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಸ್ಥಳ ಇದು. ಒಳ್ಳೊಳ್ಳೆಯ ರೇಶ್ಮೆ ಸೀರೆಗಳು, ಅದಕ್ಕೆ ತಕ್ಕಂತೆ ಆಭರಣಗಳನ್ನು
ಹೇರಿಕೊಂಡು ಓಡಾಡುವ ನಮ್ಮ ಮಹಿಳಾ ಸಮೂಹದಲ್ಲಿದ್ದಾಗ ನನಗೆ ನಮ್ಮೂರಿನ ಹಬ್ಬದಲ್ಲಿದ್ದಂತೆಯೇ ಅನಿಸಿತು. ಎಷ್ಟೋ ಹೊಸ ಹೊಸ ಕುಟುಂಬಗಳ ಪರಿಚಯವಾಯ್ತು.

ಧಾರವಾಡದವರೇ ಅದ, ಈಗ ಮದ್ರಾಸಿ ಹೆಂಡತಿಯೊಂದಿಗೆ ಮದ್ರಾಸಿ ಯಾಗಿರುವ .ಶ್ರೀ ಅರುಣಾಚಲಂ ಅವರ ಶ್ರೀಮತಿ ಗಿರಿಜಾ ಪರಿಚಯವಾದರು. ಅವರ 10 ವರ್ಷದ ಮಗಳು ಭರತನಾಟ್ಯದಲ್ಲಿ ಪ್ರವೀಣೆ. ಇಂದಿನ ಕಾರ್ಯಕ್ರಮದಲ್ಲಿ ಒಳ್ಳೆಯ ಡ್ಯಾನ್ಸ್  ಕುಡಾ ಮಾಡಿದಳು. ನಂತರ ಅವರಿಗೆ ನಮಗೆ ಬಹಳ ಪರಿಚಯವಾಯ್ತು.
ಕಾರ್ಯಕ್ರಮದಲ್ಲಿ ಗುಜರಾತಿ ಸಿಂಧಿಗಳು, ಹೆಚ್ಚಾಗಿ ಕೇರಳಿಯರು, ಬಾಂಬೆಯವರು ಕಾರ್ಯಕ್ರಮ ನಡೆಸಿಕೊಟ್ಟು. ಮಲೆಯಾಳಿ, ತಮಿಳು, ತೆಲುಗು, ಹಿಂದಿ ಹಾಡುಗಳು ನೃತ್ಯಗಳು ಎಲ್ಲ ಸಣ್ಣ ಸಣ್ಣ ಮಕ್ಕಳಿಗಾದಾದರೆ, ದೊಡ್ಡವರಿಂದ – ಹಾಸ್ಯ ಚಟಾಕಿಗಳು, ಯುಗಲು ಗಿಡಗಳು ಒಳ್ಳೆಯ ವಾದ್ಯ ವೃಂದಗಳೊಡನೆ ಎಲ್ಲರನ್ನೂ ರಂಜಿಸಿದವು.

ಮೂರು ತಾಸಿನ ಮನೋರಂಜನಾ ಕಾರ್ಯಕ್ರಮದಲ್ಲಿ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅಗಲೇ ಊಟದ ತಾಟುಗಳು ಬಂದವು. ಮಸಾಲೆ ಅನ್ನ, ಹಪ್ಪಳ, ಚಟ್ನಿ, ಜಿಲೇಬಿ ಉಪ್ಪಿನಕಾಯಿಗಳಿಂದೊಡಗೂಡಿದ ತಾಟು ನೋಡುತ್ತಿದ್ದಂತೆಯೇ ಬಾಯಿ ನೀರೂರಿತು. ಅ ಮಾತು ಈ ಮಾತಲ್ಲಿ ಊಟ ಮುಗಿಯಬೇಕಾದರೆ 9-30 ಗಂಟೆ.

ಈ ಕಾರ್ಯಕ್ರಮವನ್ನು ಇಷ್ಟೊಂದು ತಾಳ್ಮೆಯಿಂದ ಸುಂದರವಾಗಿ ಸಂಯೋಜಿಸಿದ ಮದ್ರಾಸಿನ ಶ್ರೀಮತಿ ನಿರ್ಮಲಾ ವೆಂಕಟೇಶ್ ಅವರನ್ನು ಎಲ್ಲರೂ ಕೊಂಡಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಷ್ಟೋ ಮಕ್ಕಳಿಗೆ ಭರತನಾಟ್ಯ ಇತರ ನೃತ್ಯಗಳೆಲ್ಲ ಕಲಿಸಿದ ಶ್ರೇಯಸ್ಸು ಅವರಿಗೆ ದೊರಕಿತ್ತು. ಊಟದ ನಂತರ ಒಳಗಡಗೆ ಗ್ರೀನ್
ರೂಂಗೆ ಹೋಗಿ ನಾವಾಗಿಯೇ ಅವರನ್ನು ಭೆಟ್ಟ ಯಾಗಿ ಅವರ ಕಲೆಯನ್ನು ಹೊಗಳಿವು. ನಮ್ಮ ಮಗಳಿಗೂ ಕಲಿಸಬೇಕೆಂಬ ಆಸೆ ವ್ಯಕ್ತಪಡಿಸಿದಾಗ ಅವರು ಒಪ್ಪಿಕೊಂಡರೇನೋ ನಿಜ. ಆದರೆ ಸಿಟಿ ಬಿಟ್ಟು ನಾವು (Airport camp) 25 ಕಿ.ಮೀ. ದೂರದಲ್ಲಿರುವದರಿಂದ ಹೋಗಿ ಬರುವದೇ ಸಮಸ್ಯೆಯಾಗಿ ಕೈಬಿಡಬೇಕಾಯ್ತು.

ಶ್ರೀಮತಿ ನಿರ್ಮಲಾ ಅವರು ದಿನಾಲೂ 25-30 ಜನ ನಮ್ಮ ಭಾರತೀಯ ಮಕ್ಕಳಿಗೆ ಹಾಗೂ ದೊಡ್ಡವರಿಗೆ  ಹೇಳಕೊಡುತ್ತಾರೆ. ಅದಕ್ಕೆ ಬೇಕಾಗುವ ಬಟ್ಟೆ ಬರೆ, ಸಲಕರಣೆಗಳ ವ್ಯವಸ್ಥೆ ಮಾಡುವದು, ಅದರೊಂದಿಗೆ ವಾದ್ಯ ವೃಂದದವರ ಗುಂಪು ಕೂಡಾ ಹೊಂದಿಸಿಕೊಂಡಿದ್ದಾರೆ. ಕ್ಯಾಸೆಟ್ ಮೂಲಕ ಮನೆಯಲ್ಲಿ  ಮತ್ತೆ ಪ್ರಾಕ್ಟೀಸ್ ಮಾಡಲು ಹೇಳುವರು. ನಮಗೇ ಇದ್ಯಾವುದಕ್ಕೂ ಅವಕಾಶವೇ ಸಿಗಲಿಲ್ಲ. ಅಂದೇ ಮನೆಗೆ ಬಂದು ಬರೆದ ಒಂದು ಕವನ

ಚೈತ್ರ

ಯಾವ ಋತು, ಮಾಸ ಪಕ್ಷಗಳಿಲ್ಲ ಇಲ್ಲಿ
ಆಶಾಡದ ಮಳೆ ನೋಡುವ
ಶ್ರಾವಣ ಭಕ್ತರೊಳಗೊಂದಾಗುವ
ಚೈತ್ರ ವಸಂತದೊಳಗೆ ಚಿಗುರುವಾಸೆ
ಶ್ರಾವಣದ ಜೋಕಾಲಿಗೆ ನಿಟ್ಟುಸಿರಿಡುತ್ತೇನೆ…
ಹಳ್ಳ ಹೊಳೆ ಕೊಳ್ಳ ನೆನಪಾದಾಗೆಲ್ಲ
ನಾನೇ ತುಂಬಿ ತೇಲಿಬಿಡಲೇನೋ ಎಂದು ಚಡಪಡಿಸುತ್ತೇನೆ.
ಈ ಉರಿಬಿಸಿಲಿನ ಮರುಭೂಮಿಯಲ್ಲಿ
ನನ್ನ ನಾಡು, ಜನ, ಹಸಿರು ಹೊಲಗದ್ದೆ,
ಹೂವುಗಳ ಮಂದಾರ ನೆನಪಿಸಿಕೊಂಡಾಗೆಲ್ಲ
ಚೈತನ್ಯಮೂಡಿ ಚೈತ್ರವಾಗುತ್ತೇನೆ.
ನೆನಪುಗಳ ಬಸಿರಾಗುತ್ತವೆ,
ವೇದನೆಗೆ ಸಿಕ್ಕು ಕವನಗಳು ಕುದಿಯುತ್ತವೆ
ಆಶಾಡದ ಮುಸುಲುಧಾರೆಯಂತೆ
ಕವನಗಳು ಪ್ರವಿಸುವಾಗ
ನಾನು ವಸಂತಿಸುತ್ತೇನೆ.

ನಮ್ಮ ಬೆಂಗಳೂರಿನ ಶ್ರೀ ಅಹಮ್ಮದ ಅಲಿಯವರು ಬೆಂಗಳೂರು ಬಿಟ್ಟು 40 ವರ್ಷ ಆಗಿದೆ. ಹಾಜ್‌ಗೆಂದು ಹಡಗು ಏರಿಬಂದವರು ತಮ್ಮ 25ನೇ ವಯಸ್ಸಿನಿಂದ ಇಲ್ಲಿಯೇ ತಳಊರಿದ್ದಾರೆ. ಇವರೂ ಇಂಜಿನೀಯರ ಇದ್ದು ಒಳ್ಳೆಯ ಸ್ಥಾನದಲ್ಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಆದಾಗ ಬಿ.ಇ. ಮಾಡಿಕೊಂಡು ನೌಕರಿಗಾಗಿ
ಅಲೆದಾಡುತ್ತಿದ್ದರಂತೆ. ಸಂಬಂಧಿಕರು ಹಾಜ್‌ಗೆ ಹೊರಡುವ ತಯಾರಿಯಲ್ಲಿದ್ದಾಗ ಕುತೂಹಲಗೊಂಡು ತಾವು ಹಡಗೇರಿದ್ದಾಗಿ ಹೇಳುತ್ತಾರೆ. ಅರಬ್ಬೀ ಮಹಿಳೆಯನ್ನು ಮದುವೆಮಾಡಿಕೊಂಡಿದ್ದಾರೆ. ಅವರೂ .ಶ್ರೀಮಂತ ಕೋಟ್ಯಾಧೀಶ್ವರಳು. ಮಕ್ಕಾದಲ್ಲಿಯ ಶ್ರೀಮಂತ ಪ್ಯಾಪಾರಿಯ ಮಗಳು. ಇವರಿಗೆ ಇಬ್ಬರು ಗಂಡು ಮಕ್ಕಳು; ಈಗ ಇಬ್ಬರೂ ಅಮೇರಿಕದಲ್ಲಿ ಒಬ್ಬ ಡಾಕ್ಟ್ರು ಮತ್ತೊಬ್ಬ ಇಂಜಿನಿಯರಿಂಗ್ ಓದುತ್ತಿದ್ದಾರೆ. ಮದುವೆಯ ನಂತರ ಒಂದೆರಡು ಸಲ ಬೆಂಗಳೂರಿಗೆ ಭೆಟ್ಟಯಾದದ್ದಷ್ಟೆ ಅಂತೆ. ಹೀಗಾಗಿ ಭೆಟ್ಟಿಯಾದಾಗೊಮ್ಮ ಇಡ್ಲಿ ಸಾರು ಯಾವಾಗ ಎಂದು ಅಸ್ಪಷ್ಟ ಕನ್ನಡದಲ್ಲಿ ಕೇಳಿಯೇ ಬಿಡುತ್ತಿದ್ದರು. ಅದೆಷ್ಟೋ ಸಲ ನಮ್ಮ ಮನೆಗೆ ಬಂದು ಹೋದರು. ಅವರ ಶ್ರೀಮತಿ
ಎರಡು ವರ್ಷ ಇಂಗ್ಲೆಂಡ್ದಲ್ಲಿದ್ದು ಇಂಗ್ಲೀಷು ಮಾತಾಡಲು ಕಲಿತರಂತೆ. ಆದರೂ ಅರಬ್ಬಿ ಭಾಷೆಯಂತಯೇ ಇಂಗ್ಲೀಷ್ ಮಾತಾಡುವಾಗಲೂ ಮೂಗು, ಗಂಟಲಲ್ಲಿ ಏನೋ ಸಿಕ್ಕವರ ಹಾಗೆ ತೊಂದರೆ ಪಟ್ಟುಕೊಂಡೇ ಮಾತಾಡುತ್ತಿದ್ದರು.

ನಾನು ಹೋದ ಏಳು ವರ್ಷದ ನಂತರ ನಮ್ಮ ಕ್ಯಾಂಪಿಗೆ ಕೆನಡಿಯನ್ ನಾಗರೀಕತ್ವ ಹೊಂದಿ ಭಾರತೀಯ ಬಂಗಾಲಿ  ಕುಟುಂಬ ಒಂದು ಬಂದಿತು. ಶ್ರೀಮತಿ ಇಂದ್ರಾಣಿ ಮುಖರ್ಜಿಯವರ ಪರಿಚಯ ನಮ್ಮ ಲೇಡೀಸ್ ಕ್ಲಬ್‌ನಲ್ಲಿ ಆಯಿತು.
ಶ್ರೀ ಮುಖರ್ಜಿಯವರು 8 ವರ್ಷಗಳಿಂದ ಕೆನಡಾದಲ್ಲಿ ಇಂಜಿನೀಯರಾಗಿದ್ದು ಇಲ್ಲಿಯೂ ಮುರಿದುವರಸಿದ್ದಾರೆ. ಸಂಪ್ರದಾಯಿಕ ಬಂಗಾಲಿ ಕಂಟುಂಬದವರೆಂದು ಅವರ ಮನೆಗೆ ಹೋದ ಮೇಲೆ  ಇಂದ್ರಾಣಿ ಮೈಕಟ್ಟಿನಲ್ಲಿ ಸಾಕಷ್ಟು ದಪ್ಪ ಇದ್ದರೂ ಅವರು ಕೂಚಿಪುಡಿ, ಒಡಿಸ್ಸಿ  ಪ್ರವೀಣೆ. ಮದುವೆ ನಂತರ ಕೆನಡಾಕ್ಕೆ ಹೋಗಿ  5 ವರ್ಷ ಕಳೆದೆ, ಮಗುವಾಯಿತು. ‘ರುಚಿ ಅನಿಸಿದ್ದೆಲ್ಲ ತಿಂದು ಅನೆಯಾಗಿದ್ದೆನೆ’! ಎಂದು. ಪ್ರಾಮಾಣಿಕವಾಗಿ ಹೇಳಿದರು. ಕಲ್ಕತ್ತಾದಲ್ಲಿದ್ದಾಗ ನೃತ್ಯಶಾಲೆಗೆ ಹೊಗುತ್ತಿದ್ದೆ, ನಂತರ ಆವಾಗ ಹೇಗಿದ್ದೆ, ಈಗ ಹೇಗಾಗಿದ್ದೇನೆ’ ಎಂದು ನಗುತ್ತಿದ್ದರು. ಇವರು  ಪ್ರವೀಣೆ ಎಂದು ಗೊತ್ತಾದ ಕೂಡಲೇ ‘ನನ್ನ ಮಗಳಿಗೆ ನೃತ್ಯ ಹೇಳಿಕೊಡಿ. ನಿಮ್ಮ ಮ್ಶೆ ಇಳಿಯುತ್ತದೆ’ ಎಂದೆ. ಎಷ್ಟೊಂದು ಖುಷಿಯಿಂದ ಒಪ್ಪಿಕೊಂಡರೆಂದರೆ ಅಂದೇ ಮಗಳಿಗೆ  ಮೊದಲ ಪಾಠ ಶುರುಮಾಡಿದರು.

ಹೀಗೆ ಮಗಳು ನೃತ್ಯಕ್ಕೆ ಹೊಂದಕೊಳ್ಳುತ್ತಿದ್ದಂತೆಯೇ ಮಂದಿನ 6 ತಿಂಗಳ ನಂತರ ಅವರು ಕೆನಡಾಕ್ಕೆ ಹೋಗಲೇಬೇಕಾಯ್ತು. ಹೋದರು. ನಮಗೆ ತುಂಬಾ ಬೇಸರವಾಯ್ತು.

ಕಲ್ಮತ್ತಾದವರೇ ಆದ ‘ಅಕ್ತಾರ್’ ಕುಟುಂಬದ ಪರಿಚಯ ಸಾಕಸ್ಟಾಗಿದೆ. ಒಂದು ಸಂಜೆ ಅವರಲ್ಲಿ ಊಟಕ್ಕೆ ಅಹ್ವಾನವೂ ಬಂತು.

ಶ್ರೀಮತಿ ಕಾಂತಿ ಅಕ್ತಾರ್‌ರ ಪರಿಚಯ ಇಲ್ಲಿ ಒಂದಿಷ್ಟು ಹೇಳಲೇ ಬೇಕು. ಕಾಂತಿ ಎಂ.ಎಸ್ಸಿ ಪದವೀಧರೆ.  ಪ್ಯೂಟರ್‌ದ್ದಲ್ಲಿ ಪರಣೀತರೂ ಕೂಡಾ. ಕಂಪ್ಯೂಟರ್ ಟ್ರೇನಿಂಗ್ ಮಾಡಿಕೊಳ್ಳುವಾಗ ಬರೋಡದಲ್ಲಿ ಕಂಪ್ಯೂಟರ್ ತರಬೇತಿ ಪಡೆಯಲು ಬರುತ್ತಿದ್ದ ಅಬ್ದುಲ್ ಅಕ್ತಾರ್‌ರೊಂದಿದೆ ಪರಿಚಯವಾಗಿ, ಪರಿಚಯ ಪ್ರಣಯವಾದಾಗ ಬ್ರಾಹ್ಮಣ ತಂದೆ ತಾಯಿ ಅಣ್ಣಂದಿರೆಲ್ಲರ ಧಿಕ್ಕಾರ, ಮದುವೆಗಂತೂ ತಿರಸ್ಕಾರಹಾಕಿದರು. ಎಲ್ಲರಿಂದ ಬೇಸತ್ತ ಕಾಂತಿ ಆಫ್ರಿಕದ ನೈರೋಬಿಗೆ ಕಂಪ್ಯೂಟರ್ ಕೆಲಸ ಹುಡುಕಿಕೊಂಡು ದೂರ ಹೋದರು. ಅದರೆ ಅಕ್ತಾರ್ ಅಷ್ಟಕ್ಕೆ ನಿರಾಶರಾಗಿ  ಕುಳಿತುಕೊಳ್ಳಲಿಲ್ಲ. ಕೆಲವು ತಿಂಗಳು ಗಳ ಸತತ ಪ್ರಯತ್ನದಿಂದ ತಾವೂ ನೈರೋಬಿಯಕ್ಕೆ ಹೋದರು. ಒಂದೇ ಕಡೆಗೆ ಕೆಲಸ ದೊರಕಿಸಿ ಸಂತೋಷವೂ ಪಟ್ಟರು. ಮುಂದೆ ರಿಜಿಸ್ಟ್ದ್ ಮದುವೆ ಮಾಡಿಕೊಳ್ಳಲು ಇಬ್ಬರೂ ಒಪ್ಪಿಕೊಂಡು ಭಾರತೀಯ ದೂತಾವಾಸದ ರಿಜಿಸ್ಟರ್‌ ಆಫೀಸಿನಲ್ಲಿ ತಮ್ಮ ಸಹಿ ಗಳನ್ನು ಹಾಕಿ ದೂತಾವಾಸದ ಸಿಬ್ಬಂಧಿ ವರ್ಗಕ್ಕೂ ಸ್ನೇಹಿತರಿಗೂ ಸಂತೋಷಕೂಟ ಏರ್ಪಡಿಸಿದರೆಂದು ಕಾಂತಿ ಹೇಳಿದರು.

ಮದುವೆಯಾಗಿ ಈಗ 15 ವರ್ಷಗಳಾಗಿವೆ. ಮುದ್ದಾದ ಎರಡು ಗಂಡುಮಕ್ಕಳು. ಯಾವ ವಿಷಯವಾಗಿಯೂ ಇಲ್ಲಿಯವರೆಗೆ ಸಮಸ್ಯೆಗಳು ಬಂದಿಲ್ಲ ಎಂದು ಕಾಂತಿ ಹೇಳುತ್ತಾರೆ. ಇವರದು ತುಂಬಾ ಹೊಂದಿಕೊಳ್ಳುವ ಸ್ವಭಾವ ಅಷ್ಟೇ ಅಕ್ತಾರರೂ ಕೂಡಾ ಮೇಲಿಂದ ಮೇಲೆ ಭಾರತೀಯ ಕುಟುಂಬಗಳನ್ನು ಊಟಕ್ಕೆ ಕರದೇ ಕರೆಯುತ್ತಾರೆ. ಅಡಿಗೆಯಲ್ಲಿಯೂ ಪರಣಿತೆ. ಶಾಖಾಹಾರ ಮಾಂಸಾಹಾರ ಎರಡರಲ್ಲಿಯೂ ಪಳಗಿದ ಕೈ.

ಇನ್ನೊಂದು ಇವರಲ್ಲಿಯ ವಿಶೇಷತೆ ಎಂದರೆ ಧಾರ್ಮಿಕವಾಗಿ ಭಾವನೆಗಳಿಗೆ ಒಬ್ಬರಿಂದೊಬ್ಬರಿಗೆ ಒತ್ತಡವಿಲ್ಲ. ಅಕ್ತಾರ ಅವರ ನಮಾಜ, ಉಪವಾಸ, ಇನ್ನಿತರ ಸಂಪ್ರದಾಯಗಳನ್ನು ಹೆಂಡತಿಗೆ ಮಾಡಲೇ ಬೇಕೆನ್ನುವ ಒತ್ತು ಮಾತುಗಳನ್ನು
ಯಾವಾಗಲೂ ಹೇಳುವದಿಲ್ಲವಂತೆ. ಹಾಗೆಯೆ: ಹಿಂದೂ ಹಬ್ಬಗಳನ್ನು ಕಾಂತಿ ಅಚರಿಸುವಾಗಲೂ ವಿರೋಧಿಸುವದೂ ಇಲ್ಲವಂತೆ. ಈ ವಿಶಾಲ ಮನೋಭಾವನೆ ಇಂದು ಎಷ್ಟು ಜನರಿಗಿದ್ದೀತು.

ಧಾರ್ಮಿಕ ಸಮನ್ವಯದ  ಈ ಕುಟುಂಬ ನಮ್ಮ ಮನೆಗೆ ಕಾಂತಿ ಬಂದಾಗಾಗಲೀ, ನಾನು ಆವರಲ್ಲಿ ಹೋದಾಗಾಗಲೀ ಇಂತಹ ಕೆಲವು ಅಂತರ್ಜಾತಿಯ ವಿವಾಹ, ನಂತರದ ಸಂಬಂಧಗಳು, ಅವರವರ ಅನಿಸಿಕೆ ಭಾವನೆಗಳು, ಸಮಾಜದ ನೋಟ, ಸಂಬಂಧಿಕರ ಸಹಕಾರ ಅಸಹಕಾರ, ಮಾನಸಿಕ ತುಮುಲಗಳು, ಮಕ್ಕಳ ಭವಿಷ್ಯ, ಏನೆಲ್ಲ ಮಾತಾಡುತ್ತಿದ್ದವು. ಇಂತಹದರಲ್ಲಿ ಅವರಿಗೆ ಸಾಕಷ್ಟು ಅನುಭವ ಇರುವ, ದೊಡ್ಡ ದೊಡ್ಡ ಊರುಗಳು ತಿರುಗಿ ಜನರನ್ನು ನೋಡಿರುವ – ಈ ವಿಷಯವಾಗಿ ಓದಿರುವ ಕಾಂತಿಯದೇ ಶೇ. 90 ಮಾತು ಕೇಳುತ್ತೇನೆ. ನನ್ನೊಂದಿಗೆ
ಯಾವ ವಿಷಯವೂ ಮರೆಮಾಚಿಕೊಳ್ಳುತ್ತಿರಲಿಲ್ಲ.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಂಡು ಬಂತಯ್ಯ
Next post ಲೆಕ್ಕ ಸಿಗುವುದಿಲ್ಲ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys